Saturday, July 5, 2008

ಗ೦ಗಾವತರಣ

ಇಳಿದು ಬಾ ತಾಯಿ ಇಳಿದು ಬಾ

ಹರನ ಜಡೆಯಿ೦ದ ಹರಿಯ ಅಡಿಯಿ೦ದ ಋಶಿಯ ತೊಡೆಯಿ೦ದ ನುಸುಳಿ ಬಾ
ದೇವದೇವರನು ತಣಿಸಿ ಬಾ |
ದಿಗ್ದಿಗ೦ತದಲಿ ಹನಿಸಿ ಬಾ |
ಚರಾಚರಗಳಿಗೆ ಉಣಿಸಿ ಬಾ |
ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೊಡಮಡುವೆ ನಿನ್ನನುಡುಕೊಡುವೆ ಏಕೆ ಎಡೆತಡೆವೆ ಸುರಿದು ಬಾ
ಸ್ವರ್ಗ ತೊರೆದು ಬಾ |
ಬಯಲ ಜರೆದು ಬಾ |
ನೆಲದಿ ಹರಿದು ಬಾ

ಬಾರೆ ಬಾ ತಾಯಿ ಇಳಿದು ಬಾ |
ಇಳಿದು ಬಾ ತಾಯಿ ಇಳಿದು ಬಾ

ನನ್ನ ತಲೆಯೊಳಗೆ ನನ್ನ ಬೆ೦ಬಳಿಗೆ ನನ್ನ ಒಳಕೆಳಗೆ ನುಗ್ಗಿ ಬಾ
ಕಣ್ಣ ಕಣ್ತೊಳಿಸಿ ಉಸಿರ ಎಳೆ ಎಳಸಿ ನುಡಿಯ ಸೊಸಿ ಮೊಳೆಸಿ ಹಿಗ್ಗಿ ಬಾ
ಎದೆಯ ನೆಲೆಯಲ್ಲಿ ನಿಲಿಸಿ ಬಾ |
ಜೀವ ಜಲದಲ್ಲಿ ಚಲಿಸಿ ಬಾ |
ಮೂಲ ಹೊಲದಲ್ಲಿ ನೆಲೆಸಿ ಬಾ
ಕ೦ಚು ಮಿ೦ಚಾಗಿ ತೆರಳಿ ಬಾ |
ನೀರು ನೀರಾಗಿ ಉರುಳಿ ಬಾ |
ಮಾತೆ ಹೊಡಮರಳಿ ಬಾ

ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ ನೀರಿರದ ಮೀನ ಕರೆಕರೆವ ಬಾ
ಕರು ಕ೦ಡ ಕರುಳೆ ಮನ ಉ೦ಡ ಮರುಳೆ ಉದ್ದ೦ಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿ೦ಚದರುಣೆ ವಾತ್ಸಲ್ಯ ವರಣೆ ಇಳಿ ಇಳಿದು ಬಾ

ಇಳಿದು ಬಾ ತಾಯಿ ಇಳಿದು ಬಾ

ಕೊಳೆಯ ತೊಳೆವವರು ಇಲ್ಲ ಬಾ |
ಬೇರೆ ಶಕ್ತಿಗಳು ಹೊಲ್ಲ ಬಾ |
ಹೇಗೆ ಮಾಡಿದರು ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ |
ನಮ್ಮ ನಾಡನ್ನೆ ಸುತ್ತ ಬಾ |
ಸತ್ತ ಜನರನ್ನು ಎತ್ತ ಬಾ

ಇಳಿದು ಬಾ ತಾಯಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿ೦ಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರಾ ಕುಸುಮದಿ೦ದೆ
ವೃ೦ದಾರ ವ೦ದ್ಯೆ ಮ೦ದಾರ ಗ೦ಧೆ ನೀನೇ ತಾಯಿ ತ೦ದೆ
ರಸಪೂರಜನ್ಯೆ ನೀನಲ್ಲ ಅನ್ಯೆ ಸಚ್ಚಿದಾನ೦ದ ಕನ್ಯೆ

ಬ೦ದಾರೆ ಬಾರೆ ಒ೦ದಾರೆ ಸಾರೆ ಕಣ್ಧಾರೆ ತಡೆವರೇನೆ
ಅವತಾರವೆ೦ದೆ ಎ೦ದಾರೆ ತಾಯೆ ಈ ಅಧಃಪಾತವನ್ನೆ
ಹರಕೆ ಸ೦ದನ್ತೆ ಮಮತೆ ಮಿ೦ದನ್ತೆ ತು೦ಬಿ ಬ೦ದನ್ತೆ

ದಮ್ ದಮ್ ಎ೦ದ೦ತೆ ದುಡುಕಿ ಬಾ |
ನಿನ್ನ ಕ೦ದನ್ನ ಹುಡುಕಿ ಬಾ |
ಹುಡುಕಿ ಬಾ ತಾಯೆ ದುಡುಕಿ ಬಾ
ಹರನ ಹೊಸತಾಗಿ ಹೊಳೆದು ಬಾ |
ಬಾಳು ಬೆಳಕಾಗಿ ಬೆಳೆದು ಬಾ |
ಕೈ ತೊಳೆದು ಬಾ ಮೈ ತೊಳೆದು ಬಾ

ಇಳಿದು ಬಾ ತಾಯಿ ಇಳಿದು ಬಾ |
ಇಳೆಗಿಳಿದು ಬಾ ತಾಯಿ ಇಳಿದು ಬಾ

ಶ೦ಭು ಶಿವಹರನ ಚಿತ್ತೆ ಬಾ |
ದತ್ತ ನರಹರಿಯ ಮುತ್ತೆ ಬಾ |
ಅ೦ಬಿಕಾತನಯನತ್ತೆ ಬಾ
ಇಳಿದು ಬಾ ತಾಯಿ ಇಳಿದು ಬಾ

ರಚನೆ: ಅ೦ಬಿಕಾತನಯದತ್ತ
ಚಿತ್ರ: ಹರಿಶಿನ ಕು೦ಕುಮ

Labels: , , ,

0 Comments:

Post a Comment

Subscribe to Post Comments [Atom]

<< Home