Saturday, July 5, 2008

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು;
ನಾನು ನಿನ್ನವನೆ೦ಬ ಹೆಮ್ಮೆಯ ಋಣವು ಮಾತ್ರವೆ ನನ್ನದು!

ನೀನು ಹೊಳೆದರೆ ನಾನು ಹೊಳೆವೆನು, ನೀನು ಬೆಳೆದರೆ ನಾನು ಬೆಳೆವೆನು;
ನನ್ನ ಹರಣದ ಹರಣ ನೀನು, ನನ್ನ ಮರಣದ ಮರಣವು!

ನನ್ನ ಮನದಲಿ ನೀನೆ ಯುಕ್ತಿ, ನನ್ನ ಹೃದಯದಿ ನೀನೆ ಭಕ್ತಿ;
ನೀನೆ ಮಾಯಾಮೊಹ ಶಕ್ತಿ, ನನ್ನ ಜೀವನ ಮುಕ್ತಿಯು!

ತನುವು ನಿನ್ನದು ಮನವು ನಿನ್ನದು, ಎನ್ನ ಜೀವನ ಧನವು ನಿನ್ನದು
ನಾನು ನಿನ್ನವನೆ೦ಬ ಹೆಮ್ಮೆಯ ಋಣವು ಮಾತ್ರವೆ ನನ್ನದು!


Music : Mysore Anantha Swamy
Lyrics : Kuvempu

Labels: , ,

0 Comments:

Post a Comment

Subscribe to Post Comments [Atom]

<< Home