Saturday, July 5, 2008

ಚ೦ದ್ರ ನಿನ್ಗೆ ಕರುಣೆ ಇರ್ಲಿ ಮೋಡದ್ ಮರೇಲಿರು

ಚ೦ದ್ರ ನಿನ್ಗೆ ಕರುಣೆ ಇರ್ಲಿ ಮೋಡದ್ ಮರೇಲಿರು
ಮೋಡ ಮೋಡ ಒ೦ದೇ ಸಮ್ನೆ ಮಳೆ ಸುರಿಸ್ತಿರು
ಮಿ೦ಚು ಹೊಡ್ದು ದೀಪ ಎಲ್ಲ ಥಟ್ಟನ್ತಾರಿ ಹೋಗ್ಲಿ
ಪೋಲೀಸ್ ಮಾಮ ಬರೋದ್ರಲ್ಲಿ ಎಲ್ಲೆಲ್ಲೂ ಕತ್ಲಾಗ್ಲಿ

ಗಾಳಿ ನೀನು ಜೋರಾಗ್ ಬೀಸಿ ಕಣ್ಣಿಗ್ ಮಣ್ಣು ತೂರು
ಬೀದಿ ತು೦ಬ ತೂಗ್ತ ಬರ್ಲಿ ಬರ್ಗೇರಮ್ಮನ್ ತೇರು
ಓಡೋ ಹಾದೀಗಡ್ಡ ಬರ್ಲಿ ನೂರ ಒ೦ದು ಕಾರು
ಪೋಲೀಸ್ನೋರ್ನ ಮುಕ್ಕೊ೦ಡಿರ್ಲಿ ಯಾರೋ ಮುಶ್ಕರ್ದೋರು

ಭೂಮಿ ತಾಯಿ ಕಾಪಾಡವ್ವ ಜಾರ್ದೇ ಇರ್ಲಿ ಕಾಲು
ಓಡೋವಾಗ ಉಳುಕ್ದೇ ಇರ್ಲಿ ಕಾಲಿನ್ ಮ೦ಡಿ ಕೀಲು
ಪಿಸ್ತೂಲ್ ಕುದ್ರೆ ಮೀಟಿದ್ರೂನು ಹಾರ್ದೇ ಇರ್ಲಿ ಗು೦ಡು
ಗೊತ್ತಿದ್ರೂನು ಮಾಡ್ತಿದ್ದೀವಿ ತಪ್ಪನ್ ಕ೦ಡು ಕ೦ಡು

1 Comments:

At July 5, 2008 at 4:18 PM , Blogger Pradeep said...

Movie Name: Chinnari Mutta (2000)
Singer: Ajit
Music Director: Ashwath C
Lyrics: Venkatesh Murthy H S
Year: 2000

 

Post a Comment

Subscribe to Post Comments [Atom]

<< Home